ಬಿ. ಅಜನೀಶ್ ಲೋಕನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ಸಂಯೋಜಕರಾಗಿದ್ದಾರೆ. ಅವರು ೨೦೧೫ರಲ್ಲಿ ಉಳಿದವರು ಕಂಡಂತೆ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇವರು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಅನುಪ್ ಭಂಡಾರಿ ಅವರ ಸಹಯೋಗದಲ್ಲಿ ಹೆಸರುವಾಸಿಯಾಗಿದ್ದಾರೆ. == ವೃತ್ತಿ == ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಸಂಗೀತ ಸಂಯೋಜಿಸಿದ್ದು, ರಂಗಿತರಂಗ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಉಳಿದವರು ಕಂಡಂತೆ, ಇಷ್ಟಕಾಮ್ಯ, ಕಿರಿಕ್ ಪಾರ್ಟಿ ಚಿತ್ರಗಳಿಗೆ ಹಾಡಿರುವ ಇವರು ತಮ್ಮದೇ ಚಿತ್ರಗಳಿಗೂ ಹಾಡುಗಳನ್ನು ಹಾಡಿದ್ದಾರೆ. ಇವರು ಉಳಿದವರು ಕಂಡಂತೆ ಎಂಬ ಚಲನಚಿತ್ರವನ್ನು ರೇಡಿಯೋ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಸೌತ್ ೨೦೧೫ರಲ್ಲಿ ಎಂಟು ಕ್ಷೇತ್ರಗಳಿಗೆ ನಿಯೋಜಿಸಿದ್ದಾರೆ. ಇವರು ೨೫ಕ್ಕೂ ಹೆಚ್ಚು ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. == ಧ್ವನಿಸುರುಳಿಗಳು == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==